Wednesday, 5 June 2013

ಮೊದಲ ನೋಟ

ಮೊದಲ ನೋಟಕೆ
ನೀ ಸೆಳೆದೆ ನನ್ನ ...

ಆಸೆಗಳ ಹೊಂಬಿಸಿಲಲಿ
ಕಣ್ಣ ಕಾಂತಿ ಸೂರ್ಯ ಬಿಂಬದಂತೆ
ಮಂಜು ಮುಸುಕಿದ ಮನಸಿನ ಚಿಂತೆ
ಒಮ್ಮೆ ಕದಡಿ ಹೋದಂತೆ
ಬಂದೆಯಲ್ಲಾ ಪರಿಚಿತಳಂತೆ

ಹಿಡಿದೆ ಕೈಗಳ ಯಾಕೆ
ನಾಡಿ ಮಿಡಿತ ತಿಳಿಯಲೆಂದೆ
ಪರೀಕ್ಸಿಸುವ ಮನಸಿಗೆ
ಪ್ರೀತಿ ಬೇಕೆ


* ಹರ್ಶಿ