Monday 11 October 2021

ನನ್ನ ಬಗ್ಗೆ ಬರೆದರು ಕವನ...

 ಹರ್ಷಿತ್ ಸರ್ ಇದು ನಿಮಗೆ


ಇವರು ನಗು ಮನೆಯ ಲಕ್ಷ್ಮಿ ಸಹಿತ ನಾರಾಯಣ


ನಲ್ಲೆ ಯ ಎದುರೇ ಹೂ ಹಾ ನಲ್ಲೆ ಫೇಮಸ್ ಅದ ರಂಗಾಯಣ


ಒಂದು ಮಾತಾಡದೇ ಪೂರಾ ರಾತ್ರಿ ಕೂತು ಕೇಳಬಲ್ಲರು ಕ್ಲಬ್ ಹೌಸ್ ನಾ ರಾಮಾಯಣ


ಅಗಾಗ ಹಾಜರಿಹಾಕಿ ಕಮೆಂಟ್ ಹಾಕಿ  ಚಿಟ್ಟೆಯಂತೆ ಹಾರಿ ಹೋಗುವ  ಸುಗುಣ


ಐಟಿ ಯವರು ಮೊಬೈಲ್ ಕಸಿದು ರೈಡ್ ಮಾಡುವಷ್ಟು ಶ್ರೀಮಂತ ಈ ಶರವಣ


ಹಾ ಹೂ ಒಂದು ಸುಂದರ ನಗುವಿನಲ್ಲು ಜನರ ಮನ ಗೆಲ್ಲಬಹುದು ಅಂತ ತೋರಿಸಿಕೊಟ್ಟ ನಿಪುಣ


ನನ್ನ ಭಾಗ್ಯ ಇಂತ ಸುಂದರ ಮನೆಯಲ್ಲಿ ಆಧ್ಯಕ್ಷನಾಗಿರುವೆ ನಲ್ಲ ಅಂದುಕೊಳ್ಳುವ ಈ ಶರಣ


ಕುಂದಾಪುರ ಹುಡುಗ ಕ್ಲಬ್ ನ ಯಾವೂದೇ ಕಾರ್ಯಕ್ರಮವಿರಲಿ ಹೆಸರ ಆಸೆಯಿಲ್ಲದೆ ಹಿಂದೆನಿಂತು ಸಪೋರ್ಟ್ ಮಾಡುವ ಸುಂದರ ತರುಣ


ನೀವು ಗಮನವಿಟ್ಟು ಕೇಳಬೇಕು ಈತ ಕ್ಲಬ್ ಹೌಸ್ ನಲ್ಲಿ ಮಾತು ಕಮ್ಮಿ ಆಡುದಕ್ಕೆ ಉಲ್ಲಸರು ಕೊಡುವ ಸಿಲ್ಲಿ ಸಿಲ್ಲಿ ಕಾರಣ


ಈ ಮನೆಯಲ್ಲಿ ಈ ನಗುವಿಗೆ ಈ ಕಾರಣಗಳೇ ಹೂರಣ


ಬಹಳ ಸುಂದರವಾಗಿರಲಿ ನಿಮ್ಮ ಸಂಸಾರದಲ್ಲಿ ಖುಷಿಯೆಂಬ ತೋರಣ

-Written by Vishalakshi Shetty 😊👍

Wednesday 1 September 2021

ಬದುಕಿನ ಏಣಿ

 

ಗಗನ ಚುಂಬಿ ಕಟ್ಟಡಗಳು ..

ಕಾಂಕ್ರೀಟ್ ಕಾಡುಗಳು ..

ಮನುಕುಲದ ..ಉದ್ದಾರಕೆ..

ಪೋಣಿಸಿದ ...ಮೆಟ್ಟಿಲುಗಳು ..

ಮಂಜಿನ ಮಳೆ ಹನಿಗೆ ..

ಮೆಲ್ಲನೆ ಜಾರುತಿದೆ ..

ಬಿದ್ದವರೆಷ್ಟು ..

ಲೆಕ್ಕ ಹಾಕಲು ಬಿಡುವಿಲ್ಲ..

ಮತ್ತೆ ಕಟ್ಟಲು ಪ್ರಯತ್ನ ..

ಬದುಕಿನ ಏಣಿ

Wednesday 5 June 2013

ಮೊದಲ ನೋಟ

ಮೊದಲ ನೋಟಕೆ
ನೀ ಸೆಳೆದೆ ನನ್ನ ...

ಆಸೆಗಳ ಹೊಂಬಿಸಿಲಲಿ
ಕಣ್ಣ ಕಾಂತಿ ಸೂರ್ಯ ಬಿಂಬದಂತೆ
ಮಂಜು ಮುಸುಕಿದ ಮನಸಿನ ಚಿಂತೆ
ಒಮ್ಮೆ ಕದಡಿ ಹೋದಂತೆ
ಬಂದೆಯಲ್ಲಾ ಪರಿಚಿತಳಂತೆ

ಹಿಡಿದೆ ಕೈಗಳ ಯಾಕೆ
ನಾಡಿ ಮಿಡಿತ ತಿಳಿಯಲೆಂದೆ
ಪರೀಕ್ಸಿಸುವ ಮನಸಿಗೆ
ಪ್ರೀತಿ ಬೇಕೆ


* ಹರ್ಶಿ

Thursday 4 April 2013

Bunt Wedding Rituals


                                                        Bunt Wedding Rituals
                                                               Vadhya  -  Kombhu
1.      Bride enters the wedding hall; at the entrance a young girl washes her feet. Arathi by 5 married ladies. Bride taken in procession to the stage and seated to the left of the stage
2.      Groom enters the wedding hall at the entrance feet washed by the Bride’s brother. Arathi by 5 married ladies. Groom taken in procession to the stage and seated to the right of the stage
3.      Ganesha pooja with garland, kalasha and mangalia. Purohith does the pooja with the parents of the couple. They are given arathi thirtha and Prasad
4.      The Bride’s parents take the kalasha to be blessed by elders and guests , come back to the stage and the parents pray to the crowd for their blessings
5.      Bride and Groom taken by the sister and brother in law of Groom round the mantap 3 times and brought to the centre of the mantap. Garland exchange. The Groom sprinkles shesha on the Brides head and garlands the Bride change of sides.
6.      Dharay – pouring of water
7.      Vows – Groom keeps his right hand on the Brides left shoulder and takes the marriage vow.
8.      Homa pooja for couple. Go around the fire 3 times. Each time pouring the hodalu given by the Brides Brother
9.      Sapthapadhi – After sapthapadi the mangalia is tied , all members sprinkle shesha
10.  Brides father makes the Groom and Bride sit down to the Grooms left side is the Bride
11.  Arathi by 5 married ladies
12.  Two elderly ladies keep Shesha tray on the stool
13.  Boy’s parents to bless the couple first. Girl’s parents to bless the couple second. Family elders next followed by family friends. Once the wishing is completed the couple are led out to see the sun brought back and made to sit and given tender coconut water
14.  Purohith mantra for handing over the bride to the Grooms mother. The couple take the blessings of all family members and leave for lunch 


Friday 28 December 2012


ಕಳೆದವು ನೋವು ನಲಿವಿನ ವರುಷ ಹಲವಾರು

ಮುಂದಿದೆ ಜೀವನ ಭವಿಶ್ಯದ ತಲೆಮಾರು

ಧುಮ್ಮಿಕ್ಕಿ ಹರಿಯುವ ಜಲಧಾರೆಗೆ

ಸೂರ್ಯ ಕಿರಣವು ಹೊಳಪ ತರುವಂತೆ

ನಿಮ್ಮ ಜೀವನಕೆ ಹೊಸ ವರುಷ

ಹೊಸ ಹರುಷದ ಹೊಳಪನ್ನು ತರಲಿ

"ಹೊಸ ವರುಷದ ಹಾರ್ದಿಕ ಶುಭಾಶಯಗಳು"

Saturday 25 August 2012



ವಸುಂಧರೆಗೆ ...

ನಿನ್ನ ನಿಲುವಿನಂತಿದೆಯೆ ಇಂದು 
ನಿನ್ನ ಒಲವಿನ್ನು ಉಳಿದಿದೆಯೇ ಇಂದು
ನೀ ಮಾತಾಡು ಭೂಮಿ
ಯಾಕೀಗೆ ಕಳಹೀನಳಾಗಿರುವೆ
ಅಂಜಿಕೆಯೆ
ಕಳಕಳಿಯೆ
ವಾತ್ಸಲ್ಯವೆ
ನಿತ್ಯ ನಿರಂತರ ಕಾಲ ನಿಯಮದಿ
ಮೆರೆದೆ ನಿನ್ನ ಮಾತ್ರು ಗುಣ
ನಿನ್ನೊಡಲ ಗರ್ಭದಲಿ 
ಜನಿಸಿದವು ಕೋಟಿ ಜೀವ
ತುಂಬಿದೆ ಅಸಂಖ್ಯಾತ ಆಶಯ
ಮುರಿದರು ನಿನ್ನ ಬೆನ್ನೆಲುಬು
ಕುಡಿದರು ನಿನ್ನ ನೆತ್ತರು
ಕಡಿದರು ಹಸಿರಿನ ಉಸಿರು 
ಜೀವ ಜೀವಗಳೊಡನೆ ಹೋರಾಟ
ನಿನಗಾಗಿ ಕಾದಾಟ
ಬಳಸಿದರು ನಿನ್ನ ವಿಶಿಶ್ಟ ಸ್ರಶ್ಟಿ
ಆದರವರಿಗಿಲ್ಲ ತ್ರಪ್ತಿ
ನಿನ್ನೊಡಲ ಭೂಗರ್ಭ ಶಾಸ್ತ್ರ ಮುಗಿಸಿ
ಹೊರಟರಿನ್ನೊಂದು ಲೋಕಕೆ ಚಲಿಸಿ
ದೂರದ ಚಂದಿರ ಮಾಮನಾದ
ಏನು ನೀಡದೆ ಬಚಾವಾದ
ಸಂಬಂಧವಿಲ್ಲದ ಸಂಬಂಧಿ 
ಈ ಅಂಗಾರಕ ಮಾಡ್ತಿಲ್ಲ ಫಿರ್ಯಾಧಿ   
ಮೊನ್ನೆ ಬಂದಿಳಿದ ನಿನ್ನ ಸಿಬ್ಬಂದಿ
ಬಳಿದು ಬೆಂಡಾಗಿಸುವರೆ ನನ್ನ ನಿಧಿ ?
                      * ಹರ್ಷಿತ್ ಹೆಗ್ಡೆ 


Tuesday 21 August 2012


:)
ರಂಗ್ ದೇ ಬಸಂತಿ

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಹೊಂಯ್ಗಿ ಆಣ್ಬ್ ಎದ್ದಿತ್

ಗುಡ್ಡ ಕರು ಹೆಕ್ಕಿತ್
ಬಪ್ಕಾತಿಲ್ಲಾ ಇವತ್ತು
ಅನ್ಬ್ಯಾಡಾ ಯಾವತ್ತು

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಅಜ್ಜಯ್ಯಂಗ್ ಉಸಾರಿಲ್ಲಾ

ಚಾ ಹೊಡಿ ತಪ್ಪರಿಲ್ಲಾ
ಗಂಟಿ ಕರಳ್ ಬಿಡ್ವರಿಲ್ಲಾ
ಇದ್ದೂರಂಗ್ ಮೇವಿಲ್ಲಾ
ನನ್ ಗೋಳ್ ಕೇಂಬರಿಲ್ಲಾ
ಅಂದ್ರ್ ಆತಿಲ್ಲಾ

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಛಾಟಿ ಮೀನ್ ಕುಂಬಟಿ

ಬಸ್ಲಿ ದಡಿ ಚೀಂಕಟಿ
ಮರ್ಸನ್ ಗೆಂಡಿ ವನ್ಕಟಿ
ಕಿಚ್ಚ್ ಹಿಡಿಲಿ ನಿಮ್ ಸಂತಿ
ಅನ್ಬ್ಯಾಡ ವಸಂತಿ
ಬಾ ನನ್ ಸಂಗ್ತಿ
ಅದೇ ದೊಡ್ಡ್ ಸಂಗ್ತಿ 
ಕುಂದಾಪ್ರ ಸಂತಿ 
ಶನಿವಾರ ಅಂತಿ