ವಸುಂಧರೆಗೆ ...
ನಿನ್ನ ನಿಲುವಿನಂತಿದೆಯೆ ಇಂದು
ನಿನ್ನ ಒಲವಿನ್ನು ಉಳಿದಿದೆಯೇ ಇಂದು
ನೀ ಮಾತಾಡು ಭೂಮಿ
ಯಾಕೀಗೆ ಕಳಹೀನಳಾಗಿರುವೆ
ಅಂಜಿಕೆಯೆ
ಕಳಕಳಿಯೆ
ವಾತ್ಸಲ್ಯವೆ
ನಿತ್ಯ ನಿರಂತರ ಕಾಲ ನಿಯಮದಿ
ಮೆರೆದೆ ನಿನ್ನ ಮಾತ್ರು ಗುಣ
ನಿನ್ನೊಡಲ ಗರ್ಭದಲಿ
ಜನಿಸಿದವು ಕೋಟಿ ಜೀವ
ತುಂಬಿದೆ ಅಸಂಖ್ಯಾತ ಆಶಯ
ಮುರಿದರು ನಿನ್ನ ಬೆನ್ನೆಲುಬು
ಕುಡಿದರು ನಿನ್ನ ನೆತ್ತರು
ಕಡಿದರು ಹಸಿರಿನ ಉಸಿರು
ಜೀವ ಜೀವಗಳೊಡನೆ ಹೋರಾಟ
ನಿನಗಾಗಿ ಕಾದಾಟ
ಬಳಸಿದರು ನಿನ್ನ ವಿಶಿಶ್ಟ ಸ್ರಶ್ಟಿ
ಆದರವರಿಗಿಲ್ಲ ತ್ರಪ್ತಿ
ನಿನ್ನೊಡಲ ಭೂಗರ್ಭ ಶಾಸ್ತ್ರ ಮುಗಿಸಿ
ಹೊರಟರಿನ್ನೊಂದು ಲೋಕಕೆ ಚಲಿಸಿ
ದೂರದ ಚಂದಿರ ಮಾಮನಾದ
ಏನು ನೀಡದೆ ಬಚಾವಾದ
ಸಂಬಂಧವಿಲ್ಲದ ಸಂಬಂಧಿ
ಈ ಅಂಗಾರಕ ಮಾಡ್ತಿಲ್ಲ ಫಿರ್ಯಾಧಿ
ಮೊನ್ನೆ ಬಂದಿಳಿದ ನಿನ್ನ ಸಿಬ್ಬಂದಿ
ಬಳಿದು ಬೆಂಡಾಗಿಸುವರೆ ನನ್ನ ನಿಧಿ ?