Friday, 28 December 2012


ಕಳೆದವು ನೋವು ನಲಿವಿನ ವರುಷ ಹಲವಾರು

ಮುಂದಿದೆ ಜೀವನ ಭವಿಶ್ಯದ ತಲೆಮಾರು

ಧುಮ್ಮಿಕ್ಕಿ ಹರಿಯುವ ಜಲಧಾರೆಗೆ

ಸೂರ್ಯ ಕಿರಣವು ಹೊಳಪ ತರುವಂತೆ

ನಿಮ್ಮ ಜೀವನಕೆ ಹೊಸ ವರುಷ

ಹೊಸ ಹರುಷದ ಹೊಳಪನ್ನು ತರಲಿ

"ಹೊಸ ವರುಷದ ಹಾರ್ದಿಕ ಶುಭಾಶಯಗಳು"

Saturday, 25 August 2012



ವಸುಂಧರೆಗೆ ...

ನಿನ್ನ ನಿಲುವಿನಂತಿದೆಯೆ ಇಂದು 
ನಿನ್ನ ಒಲವಿನ್ನು ಉಳಿದಿದೆಯೇ ಇಂದು
ನೀ ಮಾತಾಡು ಭೂಮಿ
ಯಾಕೀಗೆ ಕಳಹೀನಳಾಗಿರುವೆ
ಅಂಜಿಕೆಯೆ
ಕಳಕಳಿಯೆ
ವಾತ್ಸಲ್ಯವೆ
ನಿತ್ಯ ನಿರಂತರ ಕಾಲ ನಿಯಮದಿ
ಮೆರೆದೆ ನಿನ್ನ ಮಾತ್ರು ಗುಣ
ನಿನ್ನೊಡಲ ಗರ್ಭದಲಿ 
ಜನಿಸಿದವು ಕೋಟಿ ಜೀವ
ತುಂಬಿದೆ ಅಸಂಖ್ಯಾತ ಆಶಯ
ಮುರಿದರು ನಿನ್ನ ಬೆನ್ನೆಲುಬು
ಕುಡಿದರು ನಿನ್ನ ನೆತ್ತರು
ಕಡಿದರು ಹಸಿರಿನ ಉಸಿರು 
ಜೀವ ಜೀವಗಳೊಡನೆ ಹೋರಾಟ
ನಿನಗಾಗಿ ಕಾದಾಟ
ಬಳಸಿದರು ನಿನ್ನ ವಿಶಿಶ್ಟ ಸ್ರಶ್ಟಿ
ಆದರವರಿಗಿಲ್ಲ ತ್ರಪ್ತಿ
ನಿನ್ನೊಡಲ ಭೂಗರ್ಭ ಶಾಸ್ತ್ರ ಮುಗಿಸಿ
ಹೊರಟರಿನ್ನೊಂದು ಲೋಕಕೆ ಚಲಿಸಿ
ದೂರದ ಚಂದಿರ ಮಾಮನಾದ
ಏನು ನೀಡದೆ ಬಚಾವಾದ
ಸಂಬಂಧವಿಲ್ಲದ ಸಂಬಂಧಿ 
ಈ ಅಂಗಾರಕ ಮಾಡ್ತಿಲ್ಲ ಫಿರ್ಯಾಧಿ   
ಮೊನ್ನೆ ಬಂದಿಳಿದ ನಿನ್ನ ಸಿಬ್ಬಂದಿ
ಬಳಿದು ಬೆಂಡಾಗಿಸುವರೆ ನನ್ನ ನಿಧಿ ?
                      * ಹರ್ಷಿತ್ ಹೆಗ್ಡೆ 


Tuesday, 21 August 2012


:)
ರಂಗ್ ದೇ ಬಸಂತಿ

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಹೊಂಯ್ಗಿ ಆಣ್ಬ್ ಎದ್ದಿತ್

ಗುಡ್ಡ ಕರು ಹೆಕ್ಕಿತ್
ಬಪ್ಕಾತಿಲ್ಲಾ ಇವತ್ತು
ಅನ್ಬ್ಯಾಡಾ ಯಾವತ್ತು

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಅಜ್ಜಯ್ಯಂಗ್ ಉಸಾರಿಲ್ಲಾ

ಚಾ ಹೊಡಿ ತಪ್ಪರಿಲ್ಲಾ
ಗಂಟಿ ಕರಳ್ ಬಿಡ್ವರಿಲ್ಲಾ
ಇದ್ದೂರಂಗ್ ಮೇವಿಲ್ಲಾ
ನನ್ ಗೋಳ್ ಕೇಂಬರಿಲ್ಲಾ
ಅಂದ್ರ್ ಆತಿಲ್ಲಾ

ಬಾ ನನ್ ವಸಂತಿ

ಹೋಪ ಇಬ್ರು ಸಂತಿ ...

ಛಾಟಿ ಮೀನ್ ಕುಂಬಟಿ

ಬಸ್ಲಿ ದಡಿ ಚೀಂಕಟಿ
ಮರ್ಸನ್ ಗೆಂಡಿ ವನ್ಕಟಿ
ಕಿಚ್ಚ್ ಹಿಡಿಲಿ ನಿಮ್ ಸಂತಿ
ಅನ್ಬ್ಯಾಡ ವಸಂತಿ
ಬಾ ನನ್ ಸಂಗ್ತಿ
ಅದೇ ದೊಡ್ಡ್ ಸಂಗ್ತಿ 
ಕುಂದಾಪ್ರ ಸಂತಿ 
ಶನಿವಾರ ಅಂತಿ 


:)
ಸಹಿಸಲಾರದ ಮನವೆ
ಪರಿತಪಿಸುವೆ ಏತಕೆ

ನನ್ನೊಲವಿನ ಸಂಕ್ರಾಂತಿ 
ಮುಗಿಯಿತಲ್ಲವೆ ಅಮವಾಸ್ಯೆ 
ಪ್ರಕ್ಷುಬ್ದ ಆಷಾಢ ಮೌನ
ಮುರಿಯುವುದೆ ಶ್ರಾವಣ ಸಂಜೆಯಲಿ
ದಿನಕರನ ಮುಸುಕು
ದಿನದ ಬದುಕು
ಸ್ವತಂತ್ರ ದಿನ ದಿನಕು 
ಅತಂತ್ರ ಕ್ಷಣ ಕ್ಷಣಕು
ಆಹ್ವಾನದ ಮೆಲುಕು 
ಹಬ್ಬದಾ ನಿರೀಕ್ಷೆಯಲಿ
ಮತ್ತೆ ಬರಲಿದೆಯೆ ದೀಪಾವಳಿ... ?


:)
ಕಗ್ಗತ್ತಲಲಿ ಮುಳುಗಿಹ ಭಾವನೆಗಳೆ ...
ನೀ ಇಂಚಿಂಚು ಮರುಳನಾಗಿಸಿದೆ ಅಂದು ನನ್ನ ...
ಕಾರ್ಮೊಡ ನಡುವಿನಲೊಂದು ಮಿಂಚು .....
ಕಪಟ ಕವಾಟದಲೊಂದು ಸಂಚು...,

ಕನವರಿಕೆಯ ಕನಸಿನಲು ಬಾರದ ಬವಳಿಕೆ...
ಹರಿದ ಮನಸಿನಲೊಂದು ಬಿಕ್ಕಳಿಕೆ...,
ಇಂದು ನಿನ್ನೆಯದಶ್ಟೆ ಹಳತು...
ಪರಿಕಲ್ಪನೆ ಮಾಡದೆಂದು ಒಳಿತು ...,

ಅರಿವು ಇರುವಿನ ನಡುವೆ ಮಿಳಿತ...
ಏರದಿರಲಿ ನಾಡಿ ಮಿಡಿತ...
ನೆನಪಿನಾಳದ ಕೊಲ್ಮಿಂಚು...
ಕೊರೆಯುತಿದೆ ಇಂಚಿಂಚು .


Wednesday, 25 July 2012

ನಮ್ಮ ಉಸಿರೆ ನಮ್ಮ ಸ್ವಂತದ್ದಲ್ಲ ಅಂದ ಮೇಲೆ ಜಗತ್ತಿನಲ್ಲಿ ಯಾವುದು ನಮ್ಮ ಸ್ವಂತದ್ದಲ್ಲ 

Tuesday, 24 July 2012

ಹೋರಿ ಬೆನ್ನ್ ತಿಕ್ಕುವ ದ್ರಶ್ಯಾ   


ಆಸಾಡಿ ತಿಂಗ್ಳಂಗ್ ಹೆಲ್ಸಿನ್ ಹಣ್ಣ್ ತಿಂಬ್ ಕುಶಿಯೇ ಬೇರೆ ....

ಕೆಲವೊಂದು ಸಂಬಂಧಗಳು ನಮ್ಮ ಹುಟ್ಟಿನಿಂದಲೆ ಬಂದಿರುತ್ತದೆ(ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ) ...ಕೆಲವೊಂದು ನಮ್ಮ ಜೀವನದ ಪಯಣದೊಂದಿಗೆ ನಮ್ಮೊಡನೆ ಕೈ ಜೊಡಿಸಿಕೊಂಡು ಬರುವಂತದ್ದು( ಸ್ನೆಹ , ಪ್ರೀತಿ ಇತ್ಯಾದಿ) .... ಯಾವುದೆ ಸಂಬಂಧವನ್ನ ನಿರಂತರವಾಗಿ ಉಳಿಸಿಕೊಳ್ಳುವುದು ಮುಖ್ಯ, ಅದಕ್ಕೆ ನಮ್ಮ ಮಾತು ಮತ್ತು ನಡವಳಿಕೆ ಸಹಕಾರಿಯಾಗುತ್ತದೆ

Thursday, 17 May 2012

*Durgaparameshwari temple* @ yelantoor , belve , kundapura
ಎಳಂತೂರ್ ನಲ್ಲಿ ನಂಬಿದ ಗ್ರಾಮಸ್ಥರಿಂದ ಗೆಂಡ ಸೇವೆ , ಶ್ರೀ ದುರ್ಗಾಪರಮೆಶ್ವರಿ ಅಮ್ಮನಿಗೆ - Belve village , Kundapura Taluk , Udupi District
ಕೆಸ್ಕರ್ ಹಣ್ಣ್

Wednesday, 16 May 2012

ಕುಂದಾಪುರದ ಸಾಂಪ್ರದಾಯಿಕ ಅಡ್ಗಿಮನಿ ( ಅಡುಗೆ ಮನೆ ) Kitchen
ಗೊಯ್ ಹಣ್ಣ್
ನಮ್ ಯೆಳಂತೂರು ಶ್ರೀ ದುರ್ಗಾಪರಮೆಶ್ವರಿ ಅಮ್ಮನವರ ದೆವಸ್ತಾನ , ಬೆಳ್ವೆ ಗ್ರಾಮ , ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ

Tuesday, 10 April 2012

Show me the meaning of being lonely
So many words for the broken heart
It's hard to see in a crimson love
So hard to breathe
Walk with me, and maybe...

Nights to light should soon become
Wild and free, I could feel the sun.
Your every wish
Will be done.
They tell me...

Refrain :
Show me the meaning of being lonely
Is this the feeling I need to walk with?
Tell me why
I can't be there where you are
There's something missing in the heart

Life goes on 'cause it never ends
Eyes of stone observe the trends
They never say forever gaze if only
Guilty roads to an endless love
There's no control
Are you with me now?
Your every wish will be done
They tell me

Refrain

There's nowhere to run
I have no place to go
Surrender my heart, body and soul
How can it be you're asking me to feel
The things you never show?

You are missing in my heart
Tell me why
I cannot be there where you are

Wednesday, 28 March 2012




ದಕ್ಶಿಣ ಕನ್ನಡ,ಉಡುಪಿ ಹಾಗು ಉತ್ತರ ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ನಾಗ ದೇವತೆಯನ್ನ ವಿಶೇಷವಾಗಿ ಆರಾಧಿಸುತ್ತಾರೆ. ಯಾವುದೆ ವಂದು ಶುಭ ಕಾರ್ಯ ನಡೆಸುವ ಮೊದಲು ನಾಗನಿಗೆ ತನು(ನೈವೇದ್ಯ)ವನ್ನ ಕೊಟ್ಟು ಮುಂದಿನ ಕಾರ್ಯ ನಡೆಸುವುದು ಇಲ್ಲಿನ ಕಟ್ಟುಪಾಡು. ಇದರೊಂದಿಗೆ ಇನ್ನು ವಿಶೆಷ ವಾದವು ಗಳಲ್ಲಿ ನಾಗ ದರ್ಸಿನ(ದರ್ಶನ),ಢಕ್ಕೆ ಬಲಿ,ನಾಗಮಂಡಲ ಪ್ರಮುಖವಾಗಿದೆ. ಮದುವೆ, ಮಕ್ಕಳು,ಉಪದ್ರ ಮುಂತಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನರು ನಾಗದೇವತೆಯನ್ನ ಪಾತ್ರಿಗಳ್ (ಪಾತ್ರಧಾರಿಗಳು)ಮುಖಾಂತರ ಆಹ್ವಾನಿಸಿ ಕೊಂಡು ನುಡಿಯನ್ನ(ಸೊಲ್ಯುಶನ್)ಪಡೆಯುತ್ತಾರೆ ... ಇದೋ ನೊಡಿ ಕುಂದಾಪುರ ತಾಲುಕಿನ ಮಂಡಾಡಿ ಎಂಬಲ್ಲಿ 26 ವರ್ಷಗಳ ಹಿಂದೆ ನಡೆದ ನಾಗ ದರ್ಸಿನದ ಚಿತ್ರ. 

Tuesday, 27 March 2012

ಮಳೆರಾಯ ಬರಲಿಲ್ಲ ...
ಹೊಳೆಯಲ್ಲಿ ನೀರಿಲ್ಲ ... !
 ಕಾದಿದೆ ಕಲ್ಲು ಬಿಸಿಲ ಝಳಪಿಗೆ !
 ಹನಿ ಹನಿ ಮಳೆಗೆ !!....continued

Friday, 24 February 2012

ನೀವ್ ಒಬ್ರಿಗ್ ಬೆರ್ಲ್ ತೋರ್ಸ್ ರೆ, ನಾಕ್ ಬೆರ್ಲ್ ನಿಮ್ಮನ್ ತೋರ್ಸ್ತಿರತ್
ಕೆಲವ್ರ್ ತಂಮ್ದ್ ಹರ್ಕಾ ನೇಲ್ತಿದ್ರು ಅಡ್ಡಿಲ್ಲ , ಇನ್ನೊಬ್ರದ್ ಹೊಲುಕ್ ಹೊಪ್ದ್

Tuesday, 7 February 2012

ನೀವು ಸ್ವಾರ್ಥಿ ಅಲ್ಲ ಅಂತ ನಿರೂಪಿಸೊದಾದ್ರೆ ,

ನಿಮ್ಮ ಕಣ್ಣುಗಳನ್ನ ದಾನ ಮಾಡಿ ...

ನಿಮ್ಮ ನಂತರವು ಬದುಕುವ ಹಕ್ಕು ಕಣ್ಣಿಗಿದೆ :)

Friday, 3 February 2012

' ಗುರುತ್ವಾಖರ್ಷಣೆ ' ಲವ್ವ೦ಗ್ ಬೀಳ್ವರಿಗ್ ಜಬಾದಾರಿ ಅಲ್ಲಾ !